Color Sandige | ಬಣ್ಣ ಬಣ್ಣದ ಸಂಡಿಗೆ

ಬಣ್ಣ ಬಣ್ಣದ ಸಂಡಿಗೆ :

ಹಪ್ಪಳ ಸಂಡಿಗೆ ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದ್ರಲೂ ಅಮ್ಮ ಹಾಗು ಅಜ್ಜಿ ಮಾಡಿದ ಸಂಡಿಗೆ ಅಂದ್ರೆ ಸುಪರೋ ಸೂಪರ್.

ಹಾಗೆ ಮಹಿಳೆಯರಿಗೆ ಬೇಸಿಗೆ ಬಂತು ಅಂದ್ರೆ ಸಂಡಿಗೆ ಹಪ್ಪಳದ್ದೇ ಸಂಭ್ರಮ.

ನಾವು ಚಿಕ್ಕ್ಕವರಾಗಿದ್ದಾಗ ನಮ್ಮ ಅಮ್ಮ ಹಾಗು ಚಿಕ್ಕಮ್ಮ ಸೇರಿ ಅಕ್ಕಿ ಸಂಡಿಗೆ, ಸಬಕ್ಕಿ ಸಂಡಿಗೆ, ಹಪ್ಪಳ ಒಥೋದು, ಚಕ್ಲಿ ಸಂಡಿಗೆ ಎಲ್ಲ ಮಾಡುತ್ತಿದ್ದರು. ನಮಗೂ ಬೇಸಿಗೆ ರಜಾ ಶುರುವಾಗಿತ್ತು, ನಮಗೆ ಮಹಡಿ ಮೇಲೆ ಹತ್ತಿ ಹಪ್ಪಳ ಒಣ ಹಾಕುವುದೇ ಸಂಭ್ರಮ.

ಕೆಲವೊಮ್ಮೆ ಸಬ್ಬಕ್ಕಿ ಸಂಡಿಗೆ ಹಕ್ಕಿರುವುದು ಕಾಣಿಸದೆ ಅದರ ಮೇಲೆ ಕಲ್ಲಿಟ್ಟು ಜಾರಿ ಬಿದ್ದದ್ದು ಉಂಟು. ಕದ್ದು ಬೆಂದ ಹಿಟ್ಟನ್ನು ತಿಂದದ್ದು ಉಂಟು.

ಆ ದಿನಗಳೇ ಬಹಳ ಚೆನ್ನ. ಈಗಲೂ ಕೆಲವರು ಮಾಡುತ್ತಾರೆ. ಆದರೂ ಮುಂಚಿನ ಸಂಭ್ರಮ ಇಲ್ಲವೇನೋ ಅನ್ನಿಸುತ್ತೆ.

ಅಮ್ಮ ನಿಮಗೆಲ್ಲ ಕಲರ್ ಸಂಡಿಗೆ ವಿಧಾನ ವಿಡಿಯೋದಲ್ಲಿ ತಿಳಿಸಿದ್ದಾರೆ.

ಈಗ ಅದಕ್ಕೆ ಬೇಕಾದ ಸಾಮಾನುಗಳು ಹಾಗು ಮಾಡುವೆ ಬಗೆ ತಿಳಿಯಿರಿ.

ಬೇಕಾಗುವ ಸಾಮಾನು :

  • ತಿಂಡಿ ಅಕ್ಕಿ (ದಪ್ಪ ಅಕ್ಕಿ) 1 ಕೆಜಿ
  • ಸಬಕ್ಕಿ 150 gms
  • ಜೀರಿಗೆ 1 ಹಿಡಿ
  • ಬಿಳಿ ಎಳ್ಳು 3 / 4 ( ಕ್ವಾರ್ಟರ್) ಹಿಡಿ
  • ಉಪ್ಪು ( ನೀರಿನ ಅಳತೆಗೆ ಉಪ್ಪು ಹಾಕ ಬಾರದು) ( ಹಿಟ್ಟಿನ ಅಳತೆಗೆ ಉಪ್ಪು ಹಾಕಿರಿ )
  • 1 ಭಾಗ ಹಿಟ್ಟಿಗೆ 8 ಬಾಗ ನೀರು ಹಾಕಬೇಕು.
  • 5 ಬಾಗ ನೀರನ್ನು ಒಲೆಯಮೇಲೆ ಕಾಯಲು ಇಡಿ
  • 3 ಬಾಗ ನೀರನ್ನು ಹಿಟ್ಟು ಕದರಿಕೊಳ್ಳಲು ಹಾಗೆ ಕೊನಯ ಬಾರಿ ತೊಳೆದು ಕೊಳ್ಳಲು ಇಟ್ಟುಕೊಳ್ಳಿ.
  • ಆರ್ಗಾನಿಕ್ ಫುಡ್ ಕಲರ್ (ಪ್ರಾವಿಷನ್ ಸ್ಟೋರ್ಸ್ನಲ್ಲಿ ಸಿಗುತ್ತೆ)

ಮಾಡುವ ವಿಧಾನ:

  1. ಒಂದು ದಪ್ಪ ತಳ ಇರುವ ಪಾತ್ರೆ ಯನ್ನು ತೆಗೆದು ಕೊಳ್ಳಿ.
  2. ಒಂದು ಅಳತೆ ಸಂಡಿಗೆ ಹಿಟ್ಟನ್ನು ತೆಗೆದು ಕೊಳ್ಳಿ. ನೀವು ಯಾವ ಅಳತೆಯಲ್ಲಿ ಹಿಟ್ಟನ್ನು ತೆಗೆದು ಕೊಂಡಿದ್ದೀರೋ ಅದೇ ಅಳತೆಯಲ್ಲಿ 8 ಬಾಗ ನೀರನ್ನು ತೆಗೆದುಕೊಳ್ಳಿ.
  3. ಮೊದಲ 5 ಬಾಗ ನೀರನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲೆ ಇಡಿ.
  4. ಈಗ ನೀವು ಅಳತೆ ತೆಗೆದು ಕೊಂಡಿರುವ ಹಿಟ್ಟನ್ನು 2 ಭಾಗದಷ್ಟು ನೀರನ್ನು ಹಾಕಿ ಕಲಸಿಕೊಳ್ಳಿ. ಮಿಕ್ಕ ಒಂದು ಬಾಗ ನೀರು ಹಾಗೆಯೆ ಇರಲಿ. ಗಂಟುಗಳು ಇಲ್ಲದ ಹಾಗೆ ಹಿಟ್ಟನ್ನು ಕಲಸಿ ಕೊಳ್ಳಬೇಕು.
  5. ಈಗ ಕುಡಿಯುತಿರುವ ನೀರಿಗೆ ನಿಧಾನವಾಗಿ ಕದರಿದ ಹಿಟ್ಟನ್ನು ಬಿಡಿ. ಹಾಗೆ ತಿರುಗಿಸುತ್ತಿರಬೇಕು.
  6. ಮಿಕ್ಕ ವುಳಿದ ನೀರನ್ನು ಹಿಟ್ಟಿನ ಪಾತ್ರೆಯನ್ನು ತೊಳೆದು ಬಿಡಿ. ಈಗ ತಿರುಗಿಸುತ್ತಿರಬೇಕು. ಅದು ನಿಧಾನವಾಗಿ ಕುದಿಯಲು ಪ್ರಾರಂಭವಾಗುತ್ತದೆ. ಹಾಗೆ ಚೆನ್ನಾಗಿ ಕುಡಿಯುತ್ತಿರಲಿ.
  7. 5 ನಿಮಿಷದ ನಂತರ ನೀರು ಕೈ ಮಾಡಿಕೊಂಡು ಅದರ ಮೇಲೆ ಮೂರು ಬೆರಳಿನಿಂದ ತಟ್ಟಿ. ಅದು ಬೆಂದಿದ್ದರೆ ಕೈಗೆ ಅಂಟುವುದಿಲ್ಲ.
  8. ಅಂಟಿಕೊಂಡರೆ ಮತ್ತೆ ಒಂದು ಎರಡು ನಿಮಿಷ ಬೇಯಿಸಿ. ಈಗ ಸಂಡಿಗೆ ಹಿಟ್ಟು ರೆಡಿ ಯಾಗಿದೆ
  9. ರಾತ್ರಿ ಮಾಡಿ ಇಟ್ಟರೆ ಬೆಳ್ಳಿಗೆ ಎದ್ದು ಜೀರಿಗೆ ಎಳ್ಳು ಬೆರೆಸಿ ಸಂಡಿಗೆ ಇಡಬೊಹುದು. ಬೆಳ್ಳಿಗೆ 6 – 7 ಗಂಟೆಗೆ ಸಂಡಿಗೆ ಇಟ್ಟರೆ ಚೆನ್ನಾಗಿರುತ್ತೆ.
  10. ಬಿಸಿಲು ಏರಿದಷ್ಟು ಸಂಡಿಗೆ ಚೆನ್ನಾಗಿ ಒಣಗುತ್ತದೆ. ಬಿಸಿಲು ಜಾಸ್ತಿ ಇದ್ದಾರೆ ಎರಡು ದಿನ ಒಣಗಿಸಿ. ಇಲ್ಲದಿದ್ದರೆ ಮೂರು ದಿನ ಬೇಕಾಗುತ್ತೆ. ಕವರ್ ಮೇಲೆ ಸಂಡಿಗೆ ಇಟ್ಟರೆ ಬೇಗ ಬಿಡುತ್ತದೆ.

ನೀವು ನಿಮ್ಮ ಮನೆಯಲ್ಲಿ ಸಂಡಿಗೆ ಮಾಡಿ ಮತ್ತೆ ಹಳೆ ನೆನಪುಗಳ್ಳನ್ನು ಮೆಲುಕು ಹಾಕಿ. ಮಕ್ಕಳಿಗೆ ರುಚಿ ರುಚಿ ಯಾದ ಬಣ್ಣ ಬಣ್ಣದ ಸಂಡಿಗೆ ಮಾಡಿ ಕೊಡಿ.

ಇನ್ನೇನು ಮಳೆ ಬೇರೆ ಬರಲು ಶುರು ಮಾಡಿದೆ.. ಮಳೆ ಬರುವಾಗ ಈ ಸಂಡಿಗೆ, ಹಪ್ಪಳ, ಬೋಂಡಾ, ಚಕ್ಲಿ, ಎಲ್ಲ ಕರಿದ ತಿಂಡಿಗಳನ್ನು ಮಾಡಿ ತಿಂದರೆ, ಆಹಾ!!! ಅದರ ಮಜವೇ ಬೇರೆ.

ಆದರೆ ಮಿತಿಯಾಗಿ ಮಾಡಿ ಮಿತವಾಗಿ ತಿನ್ನಿ ಹಾಗು ಹಿತವಾಗಿ ಇರಿ.

Check out Akki Happala Recipe

 

Please follow and like us:
error