ತುಳಸಿ ಹಾಗು ಹೊಸಿಲು ಪೂಜಾ ವಿಧಾನ
ದಿನ ನಿತ್ಯ ಹೊಸ್ತಿಲು ಪೂಜೆ ಹಾಗು ತುಳಸಿ ಪೂಜೆಯ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ.
ದಿನ ನಿತ್ಯ ದೇವರ ಪೂಜೆ ಜೊತೆಗೆ ನಾವು ಬಾಗಿಲು ಪೂಜೆ ಹಾಗು ತುಳಸಿ ಪೂಜೆಯೆನ್ನು ಮಾಡಬೇಕು.
ಬಾಗಿಲು ಅಥವಾ ಹೊಸಿಲು ಪೂಜೆ ಮಾಡಬೇಕಾದರೆ ಬೆಳಿಗ್ಗೆ ನಾವು ಮಾಡಬೇಕಾದ ಮೊದಲ ಕೆಲಸವೇನೆಂದರೆ ಬಾಗಿಲ ಕಸ ಗುಡಿಸಿ, ನೀರು ಹಾಕಿ ರಂಗೋಲಿಯನ್ನು ಬಿಡುವುದು.
ನಂತರ ನಾವು ಸ್ನಾನವಾದ ಮೇಲೆ ದೇವರಮನೆ ಪೂಜೆ ಕೆಲಸವೆಲ್ಲಾ ಮುಗಿಸಿ, ನಂತರ ಬಾಗಿಲು ಪೂಜೆ ಹಾಗು ತುಳಸಿ ಪೂಜೆ ಮಾಡಬೇಕು.
ತುಳಸಿ ಪೂಜೆ ಮಾಡುವಾಗ ತುಳಸಿಗೆ ನೀರು ಹಾಕಿ ಈ ಮಂತ್ರವನ್ನು ಹೇಳಿಕೊಳ್ಳಬೇಕು- “ನಮಸ್ತೆಸ್ತು ಮಹಾಮಾಯೆ ಶ್ರೀ ಪೀಠ ಸುರಪೂಜಿತೆ ಶಂಖ ಚಕ್ರ ಘಧಾ ಹಸ್ತೇ ಮಹಾ ಲಕ್ಷ್ಮಿ ನಮೋಸ್ತುತೇ”. ನಂತರ ಹೊಸಲಿಗೆ ಸ್ವಲ್ಪ ನೀರನ್ನು ಚುಮಕಿಸಬೇಕು. ಈಗ ತುಳಸಿ ಹಾಗು ಹೊಸಿಲು ಎರಡು ಶುದ್ಧ ವಾದ ಹಾಗೆ.
ಈಗ ಒಂದು ಶುದ್ಧವಾದ ಬಟ್ಟೆಯನ್ನು ತೆಗೆದು ಕೊಂಡು ಹೊಸಿಲನ್ನು ಎಲ್ಲ ಬದಿಗೂ ಒರೆಸಿಕೊಳ್ಳಬೇಕು. ನಮ್ಮ ಮನೆತನದಲ್ಲಿ ಯಾವ ರೀತಿ ಅರಿಸಿನ ಕುಂಕುಮ ವಿಬೂತಿ, ಗಂಧ, ಅಕ್ಷತೆ ಇಡುತ್ತಾರೋ ಅದೇ ರೀತಿ ಇಟ್ಟು ಪೂಜೆ ಮಾಡಬೇಕು.