ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ/ Madalakki for girl child

 

ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ.

ಯಾವಾಗ ಕಟ್ಟಬೇಕು, ಯಾವ ದಿನ ಕಟ್ಟಿದರೆ ಒಳ್ಳೇದು, ಯಾರಿಗೆ ಕಟ್ಟಬೇಕು ಹಾಗು ಮಡ್ಲಕ್ಕಿಯಾ ಮಹತ್ವವನ್ನು ಮಲ್ಲಮ್ಮ ಅಜ್ಜಿ ಅವರಿಂದ ಇಲ್ಲಿ ತಿಳೀರಿ.

ಮಡಲಕ್ಕಿಯ (ಮಡಿಲ ಅಕ್ಕಿ) (ಮಡ್ಲಕ್ಕಿ) ಮಹತ್ವ:

ಪ್ರತಿ ಯೊಬ್ಬ ಹೆಣ್ಣು ಮಗಳು ತವರಿನಲ್ಲೇ ಹುಟ್ಟಿ, ಹಳುಂಡು, ಆಟವಾಡಿ, ಬೆಳೆದು, ಶಾಲಾ ಕಾಲೇಜುಗಳನ್ನೂ ಮುಗಿಸಿ, ತಂದೆ ತಾಯಿ ತೋರಿಸಿದ ಹುಡುಗನನ್ನೇ ಮನ ಮೆಚ್ಚಿ ಮದುವೆಯಾಗಿ ತವರಿನಿಂದ ಹೊರಡುತ್ತಾಳೆ.

ಹೊರಡುವಾಗ ತನ್ನ ಹೆತ್ತು ಹೊತ್ತು ಸಾಕಿ ಸಲಹಿದವರನ್ನು, ಸ್ನೇಹಿತರನ್ನು, ತನ್ನ ಸಹೋದರ ಸಹೋದರಿಯರನ್ನು ಬಿಟ್ಟು ಹೊರಡುತ್ತಾಳೆ. ದೊಡ್ಡಮ್ಮ ದೊಡಪ್ಪ, ಚಿಕ್ಕಮ್ಮ ಚಿಕ್ಕಮ್ಮ, ಅಪ್ಪ ಅಮ್ಮನ ಕಡೆಯವರ ಬಂಧು ಬಳಗದವರನ್ನು ಬಿಟ್ಟು, ತಲೆ ಬಗ್ಗಿಸಿ ತಾಳಿ ಕಟ್ಟಿಸಿಕೊಂಡು, ಗಂಡನ ಜೊತೆ ಸಪ್ತಪದಿ ತುಳಿದು, ಗಂಡನೇ ಸರ್ವಸ್ವಯೆಂದು ಗಂಡನ ಬಂಧು ಬಳಗದವರೊಂದಿಗೆ ಹೊರಡುತ್ತಾಳೆ.

ಹೊಸ ಪ್ರಪಂಚ, ಹೊಸ ಜನ, ಹೊಸ ವಾತಾವರ್ಣ, ಎಲ್ಲವೂ ಹೊಸದು, ಹೀಗೆ ಎಲ್ಲರನ್ನು ಪ್ರೀತಿಂದ ಸಂಬಾಳಿಸಿಕೊಂಡು ನಿಭಾಹಿಸುತ್ತಾ ಗೃಹಿಣಿಯಾಗಿ ಜೀವನ ನಡೆಸುತ್ತಾಳೆ. ಈ ಹೆಣ್ಣಿಗೆ ತವರಿನಿಂದ ಯಾವ ಸಿರಿ ಸಂಪತ್ತು ಸಿಗದಿದ್ದರೂ, ಮದಲಕ್ಕಿಯ ಸಿರಿ ಸಿಗಬೇಕು. ತವರಿನವರು ತಂಪಾಗಿ, ಸಂತೋಷವಾಗಿ, ತ್ರುಪ್ತಿಯಾಗಿ, ಯಾವ ತೊಂದರೆ ಬಂದರೂ ಸಹಿಸಿಕೊಂಡು ಹೋಗುವಂಥಹುದು ಈ ತವರಿನ ಸಿರಿ. ಈ ಸಿರಿಗೆ ಬೆಲೆಯನ್ನೇ ಕಟ್ಟಲು ಆಗುವುದಿಲ್ಲ.

ಮಾನವನಿಗೆ ಮಾತ್ರವಲ್ಲ, ಆ ದೇವನುದೆವತೆಗಳಿಗೆ ಈ ಸಿರಿ ಬೇಕು. ಶಿವನ ಹೆಂಡತಿ ಪಾರ್ವತಿಯು ವರ್ಷಕ್ಕೆ ಒಂದು ಸಾರಿ ತವರಿಗೆ ಬಂದು ಸಿಹಿ ಊಟ ಮಡಿ, ಹೊಸ ಬಟ್ಟೆ ಉಟ್ಟು, ಬಾಗಿನವನ್ನು ಸ್ವೀಕರಿಸುತ್ತಾಳೆ. ಆಗ ಮಗ ಗಣೇಶ ಅಮ್ಮನ್ನನ್ನು ಕರೆದುಕೊಂಡು ಹೋಗಲು ಅಮ್ಮನ ತವರಿಗೆ ಬರುತ್ತಾನೆ. ಅವನೂ ಕೂಡ ಅವನಿಗೆ ಇಷ್ಟವಾಗುವಂತಹ ತಿಂಡಿ ತಿನಿಸುಗಳನ್ನು ಊಟ ಮಾಡಿ ತನ್ನ ಗೆಳೆಯರೊಂದಿಗೆ ತನ್ನ ಎಲ್ಲ ಚಟುವಟಿಕೆ ಗಳ್ಳನ್ನು ತನ್ನ ಮಹಿಮೆಯನ್ನು ತೋರಿಸುವ ಮನಸ್ಸು. ಆಗ ತವರಿನಲ್ಲಿ ಎಲ್ಲರೂ ಗಣೇಶ ನನ್ನಾ, ಬೀದಿ ಗಳಲ್ಲಿ, ಮನೆಗಳಲ್ಲಿ, ಆಫೀಸ್ ಗಳಲ್ಲಿ, ಹೀಗೆ ತನ್ನ ಮಹಿಮೆಯನ್ನು ಮಹತ್ವವನ್ನು ತೋರಿಸಿ, ತನ್ನ ತಾಯಿ ಯನ್ನು ಒಳ್ಳೆ ದಿನ ನೋಡಿ ಕರೆದುಕೊಂಡು ಹೊರಡುತ್ತಾನೆ.

ಹೊರಡುವಾಗ ಪ್ರತಿ ಒಬ್ಬ ಗೃಹಿಣಿಯೂ ಗೌರಿ, ಗಣೇಶನಿಗೆ ಮಡ್ಲಕ್ಕಿಯನ್ನು, ಬುತಿಯನ್ನು, ಕೊಟ್ಟು ಕಳಹಿಸುತ್ತಾರೆ.

ಅದೇ ಸಂಪ್ರದಾಯವಾಗಿ ಹಿರಿಯರು ಎಲ್ಲ ಹೆಣ್ಣು ಮಕ್ಕಳಿಗೆ ತವರಿನಿಂದ ಮಡ್ಲಕ್ಕಿಯನ್ನು ಕಟ್ಟಿ, ಸಿಹಿ ತಿಂಡಿಗಳನ್ನು ಕೊಟ್ಟು ಕಳುಹಿಸುವ ವಾಡಿಕೆ ಪದ್ದತಿ ಮಾಡಿಕೊಂಡು ಬಂದಿದ್ದಾರೆ. ಅದೇ ಪದ್ದತಿ ಈಗಲೂ ಇದೆ. ಮುಂದೆಯೂ ಇರುತ್ತದೆ.

ಮಡ್ಲಕ್ಕಿಯನ್ನು ಯಾವಾಗ ಕಟ್ಟಬೇಕು:

೧. ಋತುಮತಿಯಾದಾಗ – ಕಡ್ಲೆ ಪೊಪ್ಪು ಮಡ್ಲಕ್ಕಿಯನ್ನು ಕಟ್ಟಬಹುದು.

೨. ನಿಶ್ಚಿತಾರ್ಥ – ಗಂಡನ ಮನೆಯವರಿಂದ ಕಡ್ಲೆ ಪೊಪ್ಪು ಮಡ್ಲಕ್ಕಿಯನ್ನು ಕಟ್ಟಬಹುದು.

೩. ಮದುವೆಯಲ್ಲಿ- ಪ್ರಥಮ ಶಾಸ್ತ್ರದಲ್ಲಿ ಗಂಡನ ಮನೆಯವರಿಂದ ಕಡ್ಲೆ ಪೊಪ್ಪು ಮಡ್ಲಕ್ಕಿಯನ್ನು ಕಟ್ಟಬಹುದು.

೪. ಮದುವೆಯಲ್ಲಿ ಧಾರೆ ಮುಹೂರ್ತದಲ್ಲಿ – ಹೆಣ್ಣಿನ ತವರಿನ ಮನೆಯವರಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೫. ಗಂಡನ ಮನೆಗೆ ಹೊರಡುವಾಗ – ಹೆಣ್ಣಿನ ತವರಿನ ಮನೆಯವರಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೬. ಗರ್ಭಿಣಿ ಯಾದಾಗ – ತವರಿನ ಮನೆಯವರಿಂದ ಹಾಗೂ ಗಂಡನ ಮನೆಯವರಿಂದ ಕಡ್ಲೆ ಪೊಪ್ಪು ಮಡ್ಲಕ್ಕಿಯನ್ನು ಕಟ್ಟಬಹುದು, ಎಲ್ಲರೂ ಕೊಡಬಹುದು.

೭. ಹೆರಿಗೆ ಯಾದಾಗ, ಮಗು ಬಾನಂತಿಗೆ ನೀರು ಹಾಕುವಾಗ – ಎಲ್ಲರೂ ಕಟ್ಟಬಹುದು.

೮. ಮಗುವಿಗೆ ಕೂದಲು ಕೊಟ್ಟು ಕಿವಿ ಚುಚ್ಚುವಾಗ, ತವರಿನ ಮನೆಯವರಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೯. ಬನಂತನ ಮುಗಿಸಿಕೊಂಡು ಗಂಡನ ಮನೆಗೆ ಹೋಗುವಾಗ – ತವರಿನ ಮನೆಯವರಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೧೦. ಮಗಳು ಅಳಿಯ ಹೊಸ ಮನೆ ಕಟ್ಟಿ ಗೃಹಪ್ರವೇಶ ಮಾಡಿದಾಗ – ತವರಿನ ಮನೆಯವರಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೧೧. ತವರಿನಲ್ಲಿ ಯಾವುದೇ ಶುಭ ಕಾರ್ಯವಾದರೆ, ಮನೆ ಹೆಣ್ಣು ಮಕ್ಕಳಿಗೆ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೧೨. ವರ್ಷಕ್ಕೆ ಒಂದು ಸಾರಿಯಾದರು ಹೆಣ್ಣು ಮಗಳಿಗೆ ತವರಿನಿಂದ ಮಡ್ಲಕ್ಕಿಯನ್ನು ಕಟ್ಟುವುದು ಸಂಪ್ರದಾಯ ಮತ್ತು ಶ್ರೇಯಸ್ಸು.

೧೩. ಹೆಣ್ಣು ಮುತ್ತೈದೆತನದಲ್ಲಿ ತೀರಿಕೊಂಡಾಗ – ತವರಿನಿಂದ ಅಕ್ಕಿ ಮಡ್ಲಕ್ಕಿಯನ್ನು ಕಟ್ಟಬಹುದು.

೧೪. ವಿದೇಶದಲ್ಲಿ ಇರುವ ಹೆಣ್ಣು ಮಗಳು ಗಂಡನ ಜೊತೆ ಹೊರಟಾಗ, ಹಣ್ಣುಗಳ ಬದಲು dry fruits ಮಡ್ಲಕ್ಕಿ ಕಟ್ಟಬಹುದು.

ಮಡ್ಲಕ್ಕಿಯನ್ನು ಯಾವಾಗ ಕಟ್ಟಬಾರದು:

ಮಂಗಳವಾರ,ಶುಕ್ರವಾರ, ಶನಿವಾರ, ಅಮಾವಾಸ್ಯೆ, ಎದುರು ಅಮಾವಾಸ್ಯೆ, ಹುಣ್ಣಿಮೆ ದಿನ, ರಾಹುಕಾಲ, ಶೂನ್ಯಮಾಸ,ಆಶಡಮಾಸ, ಅಧಿಕ ಮಾಸದಲ್ಲಿ ಹೆಣ್ಣು ಮಕ್ಕಳಿಗೆ ಮಡ್ಲಕ್ಕಿಯನ್ನು ಕಟ್ಟಬಾರದು.

ಮಡ್ಲಕ್ಕಿಯ ಅಕ್ಕಿ ಮತ್ತು ಕಡ್ಲೆ ಪೊಪ್ಪನ್ನು ಏನು ಮಾಡಬೇಕು?

೧. ಅಕ್ಕಿ ಇಂದ ಸಿಹಿ ಪದಾರ್ಥಗಳನ್ನು ಮಾಡಬಹುದು
ಸಿಹಿ ಪೊಂಗಲ್, ಕ್ಷೀರ ಅನ್ನ, ಒತ್ತು ಶಾವಿಗೆ – ಕಾಯಿಹಾಲು, ಅಕ್ಕಿ ಪಾಯಸ, ಹಾಲ್ಬಾಯಿ ಹೀಗೆ ಸಿಹಿ ತಿನಿಸು ಮಾಡಬಹುದು.
೨. ಕಡ್ಲೆ ಪೊಪ್ಪನ್ನು ಸಿಹಿ ತಿಂಡಿ ಪದಾರ್ಥಗಳಾದ – ಕರ್ಜಿಕಾಯಿ, ಬೇಸನ್ ಪೇಡ, ಮಾಲ್ದಿ, ಕಡ್ಲೆ ಹಿಟ್ಟು (ಗನ್ ಪೌಡರ್), ಪಂಚ ಕಜ್ಜಾಯ, ಚಿಕ್ಕಿ, ಮಾಡಬಹುದು.
ಖಾರದ ಅಡಿಗೆಗೆ ಅಕ್ಕಿ ಮತ್ತು ಕಡ್ಲೆ ಪೊಪ್ಪು ಬಳಸ ಬಾರದು.

ಬಸರಿ ಹಾಗು ಋತುಮತಿಯಾದಾಗ ಕಡ್ಲೆ ಪೊಪ್ಪನ್ನೇ ಏಕೆ ಕಟ್ಟಬೇಕು?

೧. ಸಂಸಾರ ಇರುವವರಿಗೆ ಅಕ್ಕಿ.

೨. ಸಂಸಾರ ಇಲ್ಲದವರಿಗೆ ಕಡ್ಲೆ ಪೂಪ್ಪು.

೩. ಗರ್ಭಿಣಿಯಾ ಹೊಟ್ಟೆಯಲ್ಲಿ ಒಂದು ಮಗು ಇರುವುದರಿಂದ ಕಡ್ಲೆ ಪೊಪ್ಪನ್ನು ಕಟ್ಟುವುದು.

ಮಡ್ಲಕ್ಕಿಗೆ ತೆಂಗಿನಕಾಯಿಯನ್ನುಏಕೆ ಇಡುವುದಿಲ್ಲ?

ದೇವರಿಗಾದರೆ ಮಡ್ಲಕ್ಕಿಗೆ ಒಣ ಕೊಬರಿ ಇಲ್ಲದಿದ್ದರೇ, ತೆಂಗಿನಕಾಯಿ ಇಡಬಹುದು
ಆದರೆ, ಮಾಡಲಿಗೆ ಅಕ್ಕಿ ಕಟ್ಟಿದಾಗ, ಅಕ್ಕಿ ಮೇಲೆ ತೆಂಗಿನಕಾಯಿ ಇಟ್ಟರೆ, ತೆಂಗಿನಕಾಯಿ ಕೆಡುವ ಸಂಬವ ಜಾಸ್ತಿ.
ಒಣ ಕೊಬರಿ ತುಂಬ ಶ್ರೇಷ್ಠ ಮಡ್ಲಕ್ಕಿಗೆ.

ಹೆಣ್ಣು ಮಗಳು ಮನ ನೊಂದು ಕಣ್ಣೀರು ಇಟ್ಟಾಗ?

ಹೆಣ್ಣು ಮಗಳು ಮನ ನೊಂದು ಕಣ್ಣೀರು ಇಟ್ಟಾಗ ತವರಿನಲ್ಲಿ ತರಗೆಲೆ ಉದುರುವಂತೆ, ಹಣ ಆಸ್ತಿ, ಜಾಮೀನು, ಒಡವೆ, ವಸ್ತ್ರ, ಇನ್ನು ಹಲವಾರು ಕುಂದು ಕೊರತೆಗಳು, ಸಂಬಂಧಗಳು ಎಲ್ಲವೂ ಕ್ಷೀಣಿಸುವ ಸಂಭವ ಜಾಸ್ತಿ.

ಇದಕ್ಕೆ ಪರಿಹಾರ ತವರಿನ ಸಿರಿ ಮಡ್ಲಕ್ಕಿ ಸಿಗಬೇಕು ಆ ಹೆಣ್ಣಿಗೆ. ಆಗಲೇ ಶಾಪ ವಿಮೋಚನೆ ಯಾಗುವುದು.

please visit https://youtu.be/yAtwUbxlzMM for complete procedure of madalakki

 

Please follow and like us:
error