Tulasi Pooja | Tulasi Festival

ತುಳಸಿ ಪೂಜಾ ಮಾಡುವ ತಿಂಗಳು ಸಮಯ:
ತುಳಸಿ ಹಬ್ಬವು ಕಾರ್ತಿಕ ಮಾಸದ ಪೌರ್ಣಮಿಗೆ ಮೊದಲು ಬರುತ್ತದೆ. ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ನಾವು ಪೂಜೆಯನ್ನು ಮಾಡುವ ಸಮಯ.

ಮೊದಲು ನಾವು ಪ್ರಶಾಂತವಾದ ಜಾಗವನ್ನು ಸಾರಿಸಿ, ರಂಗೋಲಿಯನ್ನು ಹಾಕಿ, ಬೃಂದಾವನಕ್ಕೆ ಅಥವಾ ಪಾಟ್ ಗೆ ಸುಣ್ಣ ಬಣ್ಣ ವನ್ನು ಹಚ್ಚಿ – ಮನೆಯ ಹೊರಗಡೆ ಅಥವಾ ಒಳಗಡೆ ಬೇಕಾದರೂ ಇಡಬಹುದು.
ಹೊರಗಡೆ ಪೂಜೆ ಮಾಡುವಾಗ ಗಾಳಿ ಬೀಸಿ ದೀಪಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮುತೈದೆಯರಿಗೆ ಹೊರಗಡೆ ತುಳಸಿ ಪೂಜೆಯ ಜಾಗದಲ್ಲಿ ಕುಂಕುಮ ತಂಬೂಲವನ್ನು ಕೊಡುವುದು ಒಳ್ಳೆಯದು.

ಪೂಜೆಗೆ ಬೇಕಾದ ಸಾಮಗ್ರಿಗಳು :
• ಹರಿಶಿನ
• ಕುಂಕುಮ
• ಗಂಧ
• ಅಕ್ಷತೆ
• ಗೆಜ್ಜೆ ವಸ್ತ್ರ
• ಅಂಗದಾರ
• ಹೂವಿನ ಹಾರ
• ಬಿಡಿ ಹೂವು
• ವೀಳೇದೆಲೆ
• ಅಡಿಕೆ
• ಧಕ್ಷಿಣೆ
• ತೆಂಗಿನ ಕಾಯಿ
• ಬಾಳೆ ಹಣ್ಣು
• ನೆಲ್ಲಿ ಗಿಡ
• ಮಾವಿನ ಸೊಪ್ಪು / ಬಾಳೆ ಕಂದು

ದೀಪ ಹಚ್ಚುವುದು:
5 ನೆಲ್ಲಿ ದೀಪಗಳನ್ನು ಹಚ್ಚಬೇಕು. ನೆಲ್ಲಿಕಾಯಿ ಯನ್ನು ಸ್ವಲ್ಪ ಕಟ್ ಮಾಡಿ, ತುಪ್ಪದ ಬತ್ತಿಯನ್ನು ಹಾಕಿ ಹಚ್ಚಿ ಆರತಿ ಮಾಡಬೇಕು. ಬೇರೆ ಮಣ್ಣಿನ ದೀಪಗಳನ್ನು ಎಷ್ಟು ಬೇಕಾದರೂ ಹಚ್ಚಬಹುದು. ಮನೆ ಮುಂದೆ, ಬಾಲ್ಕನಿ ಯಲ್ಲಿ, ಬಾಗಿಲಿನಲ್ಲಿ,ಕಿಟಕಿಯಲ್ಲಿ ಹೀಗೆ ಎಷ್ಟು ಬೇಕಾದರೂ ಹಚ್ಚಬಹುದು. ಕಳಸವನ್ನು ಇಡುವುದಿಲ್ಲ, ಲಕ್ಷ್ಮಿ ವಿಗ್ರಹ ಅಥವಾ ಫೋಟೋ ಇಟ್ಟು ಪೂಜೆ ಮಾಡಬಹುದು.

ಮುತೈದೆಯರಿಗೆ ತಂಬೂಲ :
ಮುತೈದೆಯರಿಗೆ ಕುಂಕುಮ, ಹೂವು ಕೊಟ್ಟು, ನಂತರ ತಂಬೂಲವನ್ನು ಪ್ರಸಾದವನ್ನು ಕೊಡಿ. ಈಗ ಕೆಂಪುನೀರು ಆರತಿಯನ್ನು ಮಾಡಿ, ಹಾಗೆ ಕಡೆಯದಾಗಿ ಕರ್ಪೂರದ ಮಹಾ ಮಂಗಳ ಆರತಿಯನ್ನು ಮಾಡಿ ಎಲ್ಲರಿಗೂ ಕೊಡಿ.
ಆರತಿ ಮಡಿದ ನೀರನ್ನು ಬಾಗಿಲು ಅಥವಾ ಗೇಟ್ ಗೆ ಅಡ್ಡ ಹಾಕಿ.

ದೇವರ ನೈವೇದ್ಯಕ್ಕೆ :
ನೆನಸಿದ ಕಡಲೆಕಾಳು, ಕೋಸಂಬರಿ, ಪಾನಕ, ಸಿಹಿ ಅವಲಕ್ಕಿ, ಇಡಬಹುದು. ಹಣ್ಣು ಕಾಯಿ ನೈವೇದ್ಯ ಮಾಡಬಹುದು.
ತುಳಸಿ ಅಷ್ಟೋತ್ತರ ಓದಿ ಕುಂಕುಮ ಅರ್ಚನೆ ಅಥವಾ ಅಕ್ಷತೆ ಅರ್ಚನೆ ಅಥವಾ ಹೂವಿನ ಅರ್ಚನೆ ಮಾಡಬಹುದು.

ಕದಲಿಸುವುದು : ರಾತ್ರಿ ಎಲ್ಲರ ಊಟ ಮುಗಿದ ಮೇಲೆ ತುಳಸಿಯನ್ನು ಕದಲಿಸಬಹುದು. ನಂತರ ತೆಗೆಯಬಹುದು.

Periods ಆಗಿದ್ದರೆ ಪೂಜೆ ಮಾಡಬೇಡಿ, ಮಕ್ಕಳು ಅಥವಾ ಗಂಡ ಬೇರೆ ಯಾರಾದರೂ ಇದ್ದರೆ ಪೂಜೆ ಮಾಡಬಹುದು. ಆಗ ಸಿಂಪಲ್ ಆಗಿ ಪೂಜೆಯನ್ನು ಮಾಡಿಸಿ.

ಆ ತುಳಸಿ ದೇವಿಯ ಅನುಗ್ರಹ ನಿಮ್ಮೆಲ್ಲರ ಮೇಲಿರಲಿ.
ಎಲ್ಲರಿಗೂ ತುಳಸಿ ಹಬ್ಬದ ಶುಭಾಶಯಗಳು.

Please follow and like us:
error
Summary
Tulsi Pooja
Title
Tulsi Pooja
Description

Tulasi Pooja - Festival Rituals Decoration Offerings to Goddess Lighting of lamps Aarathi Visarjan