ದೇವರ ಕೋಣೆ, ದೇವರ ವಿಗ್ರಹಗಳು ಪ್ರತಿ ದಿನ ದೇವರ ಪೂಜಾ ವಿಧಾನ ವನ್ನು ಇಲ್ಲಿ ತಿಳೀರಿ
ದಿನ ನಿತ್ಯದ ಪೂಜಾ ವಿಧಾನ
ಮಡಿ ಮಾಡುವುದು:
- ದಿನ ನಿತ್ಯದ ಪೂಜೆಗೆ ಮುನ್ನ ಮೊದಲು ನಾವು ಸ್ನಾನ ಮಾಡಿ ರೆಡಿ ಆಗಬೇಕು.
- ನಂತರ ದೇವರ ಮನೆಯನ್ನ ಒರೆಸಿ ಕೊಳ್ಳ ಬೇಕು (ಇದಕ್ಕೆ ಬೇರೆ ಬಟ್ಟೆ ಇಟ್ಟುಕೊಳ್ಳಿ) (ಎಣ್ಣೆ ಬತ್ತಿಗೆ ಬೇರೆ ಬಟ್ಟೆ ಇಟ್ಟುಕೊಳ್ಳಿ) (ದೇವರ ಸ್ಟಾಂಡ್ ಮೇಲೆ ಇರುವ ಅಕ್ಷತೆ ಹೂವ ತೆಗೆಯುವುದಕ್ಕೆ ಬೇರೆ ಬಟ್ಟೆ ಇಟ್ಟುಕೊಳ್ಳಿ).
- ಕುಬೇರನ ಮೂಲೆ ಇಂದ ಪ್ರಾರಂಭ ಮಾಡಿ ದೇವರ ಮನೆ ಪೂರ್ತಿ ಒರಸಿಕೊಳ್ಳ ಬೇಕು.
- ಪೂಜಾ ಪಾತ್ರೆಗಳನ್ನು ತೊಳೆದು ಕೊಳ್ಳ ಬೇಕು
- ಮಾಡಿ ನೀರನ್ನು ಹಿಡಿದು ಕೊಳ್ಳ ಬೇಕು.
- ಹೂವ್ಗಳನ್ನು ನೀರಿನಿಂದ ಮಡಿ ಮಾಡಿ ಕೊಳ್ಳಿ (ನೀರು ಚುಮಿಕ್ಸಿದರೆ ಬೇಸಿಗೆಯಲ್ಲಿ ಹೂವ ಬಾಡುವುದಿಲ್ಲ)
- ಬಾಗಿಲು ಪೂಜೆ ಹಾಗು ತುಳಸಿ ಪೂಜೆ ಮಾಡಿಕೊಂಡು ದೇವರ ಮನೆ ಪೂಜೆಗೆ ಮುಂದುವರಿಯ ಬೇಕು.
ಪೂಜಾ ವಿಧಾನ:
- ತೊಳೆದ ಹೂವ್ಗಳಲ್ಲಿ ತೊಟ್ಟು ಇರುವ ಹೂವಗಳಿಂದ ದೇವರ ಫೋಟೋಗಳ್ಳನ್ನು ಅಲಂಕರಿಸಿ.
- ತೊಟ್ಟು ಇಲ್ಲದ ಹೂವುಗಳನ್ನು ವಿಗ್ರಹಗಳಿಗೆ ದೀಪಗಳಿಗೆ, ಆರತಿಗೆ, ಮಾಂಗಲ್ಯ ಪೂಜೆಗೆ, ಶಿವ ಪೂಜೆಗೆ ಇಟ್ಟುಕೊಳ್ಳಿ.
- ಕೆಲವರಿಗೆ ಊದಿನ ಕಟ್ಟಿ ಹಚ್ಚಿದರೆ ಕೆಮ್ಮು ಬರುತ್ತದೆ. ಅದಕ್ಕೆ ತುಪ್ಪದ ಬತ್ತಿಗಳನ್ನು ಉಪಯೋಗಿಸಬಹದು.
- ನಿಮ್ಮಗಳ ಮನೆ ದೇವರ ವಾರ ಇರುವ ದಿನ ತುಪ್ಪದ ದೀಪ ಹಚ್ಚಿ. ಹಾಗೆ ಪ್ರತಿ ಶುಕ್ರವಾರ ತುಪ್ಪದ ದೀಪ ಹಚ್ಚಿ.
- ದಿನ ನಿತ್ಯ ಎಳ್ಳೆಣ್ಣೆ ದೀಪ ಹಚ್ಚಿದರೆ ಒಳ್ಳೇದು.
ನೈವೇದ್ಯಕ್ಕೆ :
- ಸಕ್ಕರೆ, ಹಾಲು-(ಮಡಿ ಇರಬೇಕು)
- ಹಣ್ಣು,
- ತೆಂಗಿನ ಕಾಯಿ, ಆ ದಿನದಲ್ಲಿ ಯೇನು ಇರುತ್ತೋ ಅದನ್ನೇ ನೈವೇದ್ಯ ಮಾಡಿ
- ಏನಾದರೂ ತಿಂಡಿ ನೈವೇದ್ಯಕ್ಕೆ ಇಟ್ಟರೆ – ಅದನ್ನು ಮಡಿ ಇಂದ ಮಾಡಿ.
ಕಳಸ ಇಡುವ ಬಗ್ಗೆ
- ತೆಂಗಿನ ಕಾಯಿ (ನಾರು ಇರುವುದಾದರೆ ಒಳ್ಳೇದು)
- ನಾಟಿ ವೀಳೇದೆಲೆ 5 ಇಡಬೇಕು.
- ಕಳಸದ ಚೊಂಬು- ಅದ್ರೊಳಗೆ ಒಂದು ಕಾಯಿನ್ ಮತ್ತು ಅದರ ತುಂಬ ನೀರು ಹಾಕಬೇಕು)
- ಕಳಸದ ಹಾಗು ಲಕ್ಷ್ಮಿ ವಿಗ್ರಹದ ಕೆಳಗಡೆ ಶ್ರೀ ಚಕ್ರ ಇಡೀ – ಅಕ್ಕಿ ಇಡಬೇಡಿ.
- ಅಕ್ಕಿ ಇಟ್ಟರೆ ಅಕ್ಷತೆ, ಬಾಡಿದ ಹೂವು ನೀರು, ಏನಾದರೂ ಬಿದ್ದು ಅಕ್ಕಿ ಮಲಿನವಾಗುತ್ತದೆ.
ದೇವರ ವಿಗ್ರಹಗಳನ್ನು ಇಡುವ ಬಗೆ
- ದೇವರ ವಿಗ್ರಹಗಳನ್ನು ಕಲ್ಲಿನ ಮೇಲೆ ನೆಲದ ಮೇಲೆ ಇಡಬಾರದು. (ಭೂಮಿ ಆಕರ್ಷಣೆಯ ಮಾತೆ – ಪೂಜೆ ಮಾಡಿದ ಫಲವೆಲ್ಲ ಭೂ ತಾಯಿಗೆ ಹೋಗುತ್ತದೆ. ಮರದ ಅಲಿಗೆ ಅಥವಾ ಬಟ್ಟೆ ಯನ್ನ ನೆನೆಸಿ ಹಾಸಿ ಅದರ ಮೇಲೆ ಇಡೀ.
- ಈ ಬಟ್ಟೆಯನ್ನು ದೇವರ ಸಾಮಾನು ತೊಳೆಯುವಾಗಲೇ ತೆಗಿಯಬೇಕು.
- ಹಬ್ಬಗಳಲ್ಲಿ ದೇವರ ವಿಗ್ರಹಗಳನ್ನ ಪಂಚಾಮೃತ ಅಭಿಷೇಕವನ್ನು ಮಡಿ ತೊಳೆದು ಜೋಡಿಸಿ.
ದೇವರ ಮಂತ್ರಗಳು ಹೇಳಿಕೊಳ್ಳಿ.
ಮೇಲೆ ಹೇಳಿರೋ ಎಲ್ಲ ವಿಚಾರಗಳನ್ನು ದಿನ ನಿತ್ಯ ಪಾಲಿಸಿದರೆ ಅದೇ ರೂಡಿ ಆಗುತ್ತದೆ. ಮಕ್ಕಳು ಕೂಡ ಅದನ್ನೇ ಕಲಿಯುತ್ತಾರೆ , ಸಂಪ್ರದಾಯಗಳನ್ನ ತಿಳಿದು ಕೊಳ್ಳುತ್ತಾರೆ, ಸಮಾಜಕ್ಕೆ ಒಳ್ಳೆಯ ಪ್ರಜೆಯಾಗುತ್ತಾರೆ.
ರೀತಿ ನೀತಿ ಭಯ ಭಕ್ತಿ, ಮಡಿ ಮೈಲಿಗೆ, ಶ್ರದ್ದೆ ಸಂಪ್ರದಾಯ, ಇದನ್ನೆಲ್ಲಾ ಬಳಸಿಕೊಂಡು ಪೂಜೆ ಮಾಡಿದರೆ ಇದೆ ರೂಡಿ ಯಾಗುತ್ತದೆ. ನಮ್ಮ ನಿಮ್ಮ ಜೀವನದಲ್ಲಿ ಇವೆಲ್ಲವನ್ನೂ ಅಳವಡಿಸಿಕೊಂಡು ಪೂಜೆ ಪೂನಸ್ಕಾರಗಳ್ಳನ್ನು ಮಾಡಿದರೆ ನಾವು ನಂಬಿದ ದೇವರು ನಮ್ಮ ಕೈ ಬಿಡುವುದಿಲ್ಲ.