Santhana Lakshmi Pooja Vidhana !!!
ಮಕ್ಕಳಿಲ್ಲ ಎಂಬ ಬಾದೆ ನಿಮ್ಮನ್ನು ಕಾಡುತ್ತಿದಿಯೇ? ಇಲ್ಲಿದೆ ಪರಿಹಾರ !!!
ನೀವು ಜಾಸ್ತಿ ಏನು ಕಷ್ಟ ಪಡಬೇಕಾಗಿಲ್ಲ. ಶ್ರದ್ಧೆ ಇಂದ ಸಂತಾನ ಲಕ್ಷ್ಮೀ ಪೂಜೆ ಮಾಡಿ.ಆ ತಾಯಿ ನಿಮ್ಮನ್ನು ಹರಸಿ ಸಂತಾನ ವನ್ನು ಕರುಣಿಸುತ್ತಾಳೆ !!!
ಸಂತಾನ ಲಕ್ಷ್ಮೀ ಪೂಜೆಯು ತುಂಬ ಶ್ರೇಷ್ಠ ಹಾಗು ಅತ್ಯುತ್ತಮವಾದ ಪೂಜೆ. ಸಂತಾನ ಇಲ್ಲದೆ ಇರುವವರು, ಸಂತಾನದಲ್ಲಿ ಏರು ಪೇರು ಇರುವವರು, ಈಗ ಇರುವ ಮಕ್ಕಳ ಬಗ್ಗೆ ಅಂದರೆ ಶರೀರದ ನಾನಾ ತೊಂದರೆಗೆ ಈಡಾದಾಗ ಬೇಡಿಕೊಳ್ಳುವ ಸಂತಾನ ಲಕ್ಷ್ಮಿ ಪೂಜೆ.
ಈ ಪೂಜೆಯನ್ನು ಬೆಳ್ಳಿಗೆ ಉಪವಾಸವಿದ್ದು ಮಾಡಬೇಕು. ಸಂಜೆ ಮಾಡುವುದಾದರೆ ಮಧ್ಯಾಹ್ನ ಊಟ ವಾದ ಮೇಲೆ ಏನು ತಿನ್ನುವುದು ಬೇಡ.
ಸಂಜೆ ೪-೬ ಗಂಟೆ ಒಳಗೆ ಮುಗಿಸಿದರೆ ಮಕ್ಕಳು ಪ್ರಸಾದಕ್ಕೆ ಬರುವುದಕ್ಕೆ ಅನುಕೂಲ.
ಈ ತಾಯಿಗೆ ಮಕ್ಕಳು ಎಂದರೆ ತುಂಬ ಇಷ್ಟ. ಅದಕ್ಕೆ ಈ ದೇವಿಯನ್ನ ಯಾರೇ ಮಕ್ಕಳಿಲ್ಲದವರು ಬೇಡಿಕೊಂಡರು ಮಗುವನ್ನ ಕರುಣಿಸುತ್ತಾಳೆ. ಹಾಗಂತ ಸುಮ್ಮನೆ ಇರುವುದು ಸರಿಯಲ್ಲ. ನಿಮ್ಮ ಜಾತಕವನ್ನು (ಗಂಡ ಹೆಂಡತಿ ಇಬ್ಬರ ಜಾತಕ) ಒಳ್ಳೆಯ ಪುರೋಹಿತರಿಗೆ ತೋರಿಸಿದರೆ, ಏನು ದೋಷವಿದೇ ಎಂದು ಹೇಳುತ್ತಾರೆ.
ಅದರಂತೆ ನೀವು ನಾಗರ ಕಲ್ಲು ಪೂಜೆ, ಉತ್ತ ಪೂಜೆ, ಹಿರಿಯರ ಪೂಜೆ, ನಾಗರ ಹತ್ಯೆ ಪೂಜೆ, ಗರ್ಭ ಕೋಶದಲ್ಲಿ ತೊಂದರೆ, ಗಂಗಮ್ಮ ಪೂಜೆ, ನಾಗರ ಪ್ರತಿಷ್ಠೆ, ಮನೆ ದೇವರ ದೋಷ ಹೀಗೆ ಏನು ದೋಷವಿದೆ ಎಂದು ತಿಳಿದು ಕೊಂಡು, ಗಂಡ ಹೆಂಡಿರು ಇಬ್ಬರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು.
ದೇವರಲ್ಲಿ ನಂಬಿಕೆ ಮುಖ್ಯ. ಸಂತೋಷದಿಂದ ಈ ದೇವಿ ಯನ್ನು ಪೂಜಿಸಿ.
ಕಳಸವನ್ನು ಇಡುವಾಗ ತುಂಬ ನಂಬಿಕೆ ಇಂದ ಬೇಡಿಕೊಂಡು ಇಡಿ.
ನಿಮ್ಮ ಅಂತರಂಗದಲ್ಲಿ ಏನು ಇದೆಯೋ ಅದನ್ನೇ ಬೇಡಿ ಕೊಳ್ಳಿ. ಪೂಜಾ ವಿಧಾನದಲ್ಲಿ ಎಲ್ಲ ವನ್ನು ತಿಳಿಸಿದ್ದೀನಿ.
ಮಕ್ಕಳಿಗೆ ಇಷ್ಟವಾಗುವಂತಹ ತಿಂಡಿಗಳನ್ನ ನೈವೇದ್ಯ ಮಾಡಿ ಮಕ್ಕಳಿಗೆ ಹಂಚಿ.
ಮೂರು ಜನ ಮುತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಆಶೀರ್ವಾದ ಪಡೆಯಿರಿ.
ಒಂದು ಪಕ್ಷ ಯಾರು ಸಿಗದಿದ್ದರೆ ಆಫೀಸ್ ನಲ್ಲಿ ನಿಮ್ಮ ಫ್ರೆಂಡ್ಸ್ ಗೆ ಕುಂಕುಮ ಕೊಡಿ.
ಮುತೈದೆಯರಿಗೆ ಮಕ್ಕಳಿಗೆ ಬೆಳ್ಳಿಗೆ ಕುಂಕುಮ ಕೊಡಲು ಆಗದಿದ್ದರೆ ಸಂಜೆ ಕರೆದು ಕುಂಕುಮ ತಿಂಡಿ ಯನ್ನು ಕೊಡಿ.
ಮಕ್ಕಳಿಗೆ ಇಷ್ಟವಾಗುವಂತಹ ತಿಂಡಿಗಳನ್ನ ನೈವೇದ್ಯ ಮಾಡಿ ಮಕ್ಕಳಿಗೆ ಹಂಚಿ.
ಮೂರು ಜನ ಮುತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಆಶೀರ್ವಾದ ಪಡೆಯಿರಿ.
ಒಂದು ಪಕ್ಷ ಯಾರು ಸಿಗದಿದ್ದರೆ ಆಫೀಸ್ ನಲ್ಲಿ ನಿಮ್ಮ ಫ್ರೆಂಡ್ಸ್ ಗೆ ಕುಂಕುಮ ಕೊಡಿ.
ಸಂಜೆ ಮಡಿಯುಟ್ಟು ದೀಪ ಹಚ್ಚಿ ಅಷ್ಟೊತ್ರ ಹೇಳಿ, ನಾಮಸಂಸ್ಥೆಸ್ತು ಸ್ತೋತ್ರ ಪೂರ್ತಿ ಹೇಳಿ ಆರತಿ ಮಾಡಿ, ಪ್ರದಕ್ಷಿಣೆ ನಮಸಕಾರ ಮಾಡಿ.
ಮಕ್ಕಳಿಂದ ಏನಾದ್ರು ಪದ್ಯ ಹಾಡು ಏನಾದರೂ ಹೇಳಿಸಿ.
ಅವರಿಗೂ ಮಂಗಳಾರತಿ ಕೊಡಿ.
ಪ್ರಸಾದವನ್ನು ಕೊಡಿ.
ಸಂತಾನ ಲಕ್ಷ್ಮಿ ನಿಮ್ಮ ಮನೆಗೆ ಯಾವ ಮಕ್ಕಳ ರೂಪದಲ್ಲಿ ಬಂದಿರುತ್ತಲೋ ಯಾರಿಗೆ ಗೊತ್ತು.
ಹಿರಿಯರ ಆಶೀರ್ವಾದ ಪಡೆಯಿರಿ. 8 ವಾರ ಮಾಡಿ. ತುಂಬ ಕಠಿಣ ಸಮಸ್ಯೆ ಇದ್ದಾರೆ 16 ವಾರ ಮಾಡಿ.
ಹೆಣ್ಣಾಗಲಿ ಗಂಡಾಗಲಿ ಸಂತಾನ ಲಕ್ಷ್ಮಿ ಕರುಣಿಸಿದ ಕೂಸು ಲಕ್ಷ್ಮಿ ಕಟಾಕ್ಷವನ್ನೇ ತರುವಂತಹ ಸಂಭವವೇ ಜಾಸ್ತಿ.
ನನಗೆ ಏನು ಗೊತ್ತಿದಿಯೋ ಅದನ್ನೇ ನಿಮಗೂ ತಿಳಿಸಿ ಕೊಟ್ಟಿದೀನಿ.
ಈ ಪೂಜೆ ಇಂದ ತುಂಬ ಜನರಿಗೆ ಉಪಯೋಗವಾಗಿರುವುದನ್ನ ನನ್ನ ಜೀವನದಲ್ಲಿ ನೋಡಿದ್ದೇನೆ.
ಎಲರಿಗೂ ಒಳ್ಳೆಯದಾಗಿದೆ. ನಿಮಗೂ ಒಳ್ಳೆಯದಾಗುತ್ತದೆ .
ಈ ತಾಯಿಗೆ ಗೊತಿಲ್ಲದ ವಿಚಾರಗಳು ಯಾವುದು ಇಲ್ಲ
ನೀವು ಪೂಜೆ ಮಾಡುವಾಗ ಯಾವುದಾದರು ದೋಷ ವಿದ್ದರೆ ಬಗೆ ಹರಿಸುವ ದಾರಿಯನ್ನು ಕೂಡ ಯಾರ ಮುಕಾಂತರ ವಾದರೂ ನಿಮಗೆ ತಿಳಿಸುತ್ತಾಳೆ.
ಶ್ರದ್ದೆ ಇಂದ ದೇವಿಯನ್ನು ಆರಾಧಿಸಿ, ಎಲ್ಲವೂ ಒಳ್ಳೇದಾಗುತ್ತದೆ
ಈ ಪೂಜೆ ಗೆ ಬುಧುವಾರ, ಗುರುವಾರ, ಶುಕ್ರವಾರ ಶ್ರೇಷ್ಠ .
check out deepavali lakshmi pooja vidhana