Vidhya Lakshmi Pooja Vidhana || ವಿದ್ಯಾ ಲಕ್ಷ್ಮಿ ಪೂಜಾ ವಿಧಾನ

ವಿದ್ಯಾ ಲಕ್ಷ್ಮಿ ಪೂಜಾ ವಿಧಾನ:

ವಿಧ್ಯಾ ಲಕ್ಷ್ಮಿ ಪೂಜೆ ಎಂದರೆ ವಿಧ್ಯೆ ಒಂದೇ ಅಲ್ಲ – ಜ್ಞಾನ, ಬುದ್ಧಿ, ಜ್ಞಾನೋದಯ ಇನ್ನು ಅನೇಕ ರೀತಿಯ ಪರಿಹಾರಗಳು ಈ ವಿಧ್ಯಾ ಲಕ್ಷ್ಮಿಯ ಅನುಗ್ರಹ ದಿಂದ ಲಭ್ಯ ವಾಗುತ್ತದೆ. ಕಷ್ಟ ಎಂದು ಬೇಡಿ ಕೊಂಡರೆ ಕರುಣೆ ಇಂದ ಸರಾಗವಾಗಿ ಬೇಡಿದ ಇಶ್ಟರ್ಥಗಳನ್ನು ಕೊಡುವುದು ವಿಧ್ಯಾ ಲಕ್ಷ್ಮಿ.

ಯಾರೇ ಆಗಲಿ ಧೇಹಿ ಅಂತ ಬೇಡಿ ಕೊಂಡರೆ ಕೈ ಬಿಡುವುದಿಲ್ಲ ಈ ವಿಧ್ಯಾ ಲಕ್ಷ್ಮಿ.

ನಾವುಗಳು ಎಷ್ಟೇ ಅಸ್ತಿ, ಹಣ, ಐಶ್ವರ್ಯ, ಕೀರ್ತಿ ಯನ್ನು ಸಂಪಾದಿಸಿದರು, ಅವುಗಳ್ಳನು ಕಳೆದು ಕೊಳ್ಳುವ ಸಾಧ್ಯತೆ ಇದೆ.

ಆದರೆ ವಿದ್ಯಾ ಎಂಬ ದೊಡ್ಡ ಆಸ್ತಿ ನಮ್ಮಲ್ಲಿ ಇದ್ದಾರೆ ಅದನ್ನು ಯಾರು ಕಸೆದು ಕೊಳ್ಳಲು ಸಾಧ್ಯವಿಲ್ಲ.

ಉಪವಾಸ:

ಬೆಳ್ಳಿಗೆ ಪೂಜೆ ಮಾಡುವ ಹಾಗಿದ್ದರೆ ಉಪವಾಸ ವಿದ್ದು ಮಾಡಿ. ಸಂಜೆ ಮಾಡುವ ಹಾಗಿದ್ದರೆ ಮಧ್ಯಾಹ್ನ ಊಟವಾದ ಮೇಲೆ, ಪೂಜೆ ಮೂಗಿಸುವ ವರೆಗೂ ಏನು ಸೇವಿಸ ಬಾರದು.

ಸಂಜೆ ಪೂಜೆ ಮಾಡುವ ಹಾಗಿದ್ದರೆ ಆಫೀಸ್ ನಿಂದ ಬಂದು ಮಾಡಿಯುಟ್ಟು ಪೂಜೆ ಮಾಡಿ, ದೀಪ ಹಚ್ಚಿ ಸಂಜೆ ಪೂಜೆ ಮಾಡುವ ಹಾಗಿದ್ದರೆ ಆಫೀಸ್ ನಿಂದ ಬಂದು ಮಾಡಿಯುಟ್ಟು ಪೂಜೆ ಮಾಡಿ, ದೀಪ ಹಚ್ಚಿ, ಅಷ್ಟೊತ್ರ್ರ ಮಾಡಿ, ನಮಸ್ತೆಸ್ತು ಹಾಡನ್ನು ಹಾಡಿ ಪೂಜೆ ಮಾಡಿ.

ಪುಸ್ತಕ ಗಳ್ಳನ್ನು ಇಟ್ಟು ಪೂಜೆ ಮಾಡಿ.

ಯಾರು ಮಾಡಬೇಕು:

  • ಕೆಲವು ಮಕ್ಕಳಿಗೆ ವಿಧ್ಯೆ ಅತ್ತುವುದಿಲ್ಲ
  • ಕೆಲವರಿಗೆ ಶಾಲೆಗೆ ಹೋಗೋದುಕ್ಕೆ ಮನೆಯಲ್ಲಿ ತೊಂದರೆ
  • ಕೆಲವರಿಗೆ ಮುಂದೆ ಓದುವುದಕ್ಕೆ ತೊಂದರೆ ಹೀಗೆ ಇನ್ನು ಹಲವಾರು ಸಮಸ್ಯೆ ಗಳಿಗೆಲ್ಲ ಪರಿಹಾರ ವಿಧ್ಯಾ ಲಕ್ಷ್ಮಿ ಪೂಜೆ.
  • ಮಕ್ಕಳಿಗೋಸ್ಕರ ಪೂಜೆ ಮಾಡಿ.
  • ಕೆಲಸ ಸಿಗದಿದ್ದರೆ ಸಿಗಲಿ ಎಂದು ಪೂಜೆ ಮಾಡಿ.

  • ನಿಮ್ಮ ವಿಧ್ಯಾ ತಕ್ಕ ಕೆಲಸ ಸಿಗದಿದ್ದರೆ ಸಿಗಲಿ ಎಂದು ಪೂಜೆ ಮಾಡಿ.

  • ನಿಮ್ಮ ಯೆಜಮಾನರಿಗೋಸ್ಕರ ಒಳ್ಳೆಯ ಕೆಲಸ ಸಿಗಲಿ ಎಂದು ಪೂಜೆ ಮಾಡಿ.

ನೈವೇದ್ಯ:

ದೇವಿಗೆ ನೈವೇದ್ಯ ಮಾಡಿದ ಸಿಹಿ ತಿಂಡಿಗಳನ್ನು ಮಕ್ಕಳಿಗೆ ಹಂಚಿ.

ಮನೆಯಲ್ಲಿ ದೊಡ್ಡವರಿದ್ದಾರೆ ಅವರ ಆಶೀರ್ವಾದವನ್ನು ಪಡೆಯಿರಿ.

ನೈವೇದ್ಯಕ್ಕೆ ಗೋಧಿ ಹಾಗು ರವೇ ಇಂದ ಮಡಿದ ತಿಂಡಿ ಅಡಿಗೆಗಳು ಈ ತಾಯಿಗೆ ತುಂಬ ಇಷ್ಟ.

ಎಷ್ಟು ವಾರ ಮಾಡಬೇಕು:

8 ವಾರ ಮಾಡಿ- ನಿಮಗೆ ಆಗಲೇ ಸುಖಕರವಾದ ದಾರಿ ಕಾಣಿಸುತ್ತದೆ.

ಕಠಿಣ ವಾಗಿದ್ದರೆ 16  ವಾರ ಮಾಡಿ.

ನಿಮ್ಮ ಶ್ರದ್ದೆ ಭಕ್ತಿ ವಿನಯ ನಿರ್ಮಲವಾದ ಮನಸ್ಸು, ನಂಬಿಕೆ ಎಲ್ಲವೂ ಆ ತಾಯಿಗೆ ಖಂಡಿತ ಪ್ರೀತಿಯಾಗುತ್ತದೆ.

ಬೇಡಿದ ಇಷ್ಟಾರ್ಥಗಳು ನೆರವೇರುತ್ತವೆ. ಇಷ್ಟಾರ್ಥ ನೆರವೇರಿದ ಮೇಲೆ, ನಿಮಗೆ ಯಾವುದಕ್ಕೂ ಕೊರತೆ ಇರುವುದಿಲ್ಲ.

ಆಗ ನೀವು ಬಡ ಬಗ್ಗರಿಗೆ, ವಿದ್ಯೆ ಬೇಕು ಅನ್ನುವವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ.

ಬಿಡುವಿದ್ದರೆ ಮಕ್ಕಳಿಗೆ ಪಾಠ ಹೇಳಿ ಕೊಡಿ, ಆ ವಿದ್ಯಾ ಲಕ್ಷ್ಮಿ ಯು ನಿಮ್ಮ ಕೆಲಸ ಕಾರ್ಯ ಗಳ್ಳನ್ನು ನೋಡಿ ತೃಪ್ತಿಯನ್ನು ಪಡೆಯುತ್ತಾಳೆ. ಹಾಗೆ ಮುಂದೆಯೂ ಚೆನ್ನಾಗಿರಲಿ ಎಂದು ಆಶೀರ್ವಾದವನ್ನು ಮಾಡುತ್ತಾಳೆ.

ಏನಾದರೂ ದೋಷ ವಿದೇಯ ವೆಂದು ನಿಮ್ಮ ಜಾತಕವನ್ನ ತೋರಿಸಿ, ಪರಿಹಾರ ಮಾಡಿಕೊಳ್ಳಿ, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಅದನ್ನು ತಿಳಿದು ಕೊಂಡು ಪರಿಹರಿಸಿಕೊಳ್ಳಿ.

ಮನುಷ್ಯನಿಗೆ ಯಾವ ವಿಧದಲ್ಲಿ ಯಾದರು ಸಮಸ್ಯೆ ಇದ್ದೆ ಇರುತ್ತದೆ. ಇಲ್ಲದಿದ್ದರೆ ಮನುಷ್ಯನನ್ನು ಹಿಡಿಯುವುದಕ್ಕೆ ಆಗುವುದಿಲ್ಲ.

ಜೀವನದಲ್ಲಿ ಎಲ್ಲ ಸಮಸ್ಯೆಗಳನ್ನೂ ದಾಟಿ ಮುಂದೆ ಬಂದಾಗ ಜೀವನ ಸುಂದರ ವಾಗಿರುತ್ತದೆ.

ಇದನ್ನು ತಿಳಿದು ಕೊಂಡು ನಡೆದರೆ ಜೀವನೇ ಸ್ವರ್ಗವಾಗುತ್ತದೆ.

ವಿದ್ಯಾ ಲಕ್ಷ್ಮೀಯಾ ಆಶೀರ್ವಾದ ಸದಾ ನಿಮೊಂದಿಗೆ ಇರಲಿ ಎಂದು ಹಾರೈಸುತ್ತೇನೆ.

Please follow and like us:
error