Mooli Halwa – Very Tasty

Easy to make Mooli Halwa

ಮೂಲಂಗಿ ಹಲ್ವಾ- ಬಲು ರುಚಿಕರ!!!! ಬೇಕಾಗುವ ಸಾಮಗ್ರಿಗಳು • ಮೂಲಂಗಿ 1/2 ಕೆಜಿ • ಸಕ್ಕರೆ 100 gm • ಹಾಲು 100 gm (1 ಕಪ್) • ಏಲಕ್ಕಿ 5-7 • ದ್ರಾಕ್ಷಿ • ಗೋಡಂಬಿ • ತುಪ್ಪ 50 gm (1/2 ಕಪ್ or 3 - 5 ಟೇಬಲ್ ಸ್ಪೂನ್) ಮಾಡುವ ವಿಧಾನ : step 1 : ಮೂಲಂಗಿ ಅನ್ನು ಸಿಪ್ಪೆ ತೆಗೆದು ತೊಳೆದು ತುರುದು ಕೊಳ್ಳಿ. step 2 : ತಳ ದಪ್ಪ ಇರುವ ಪಾತ್ರೆ ಓಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ವನ್ನ ಹಾಕಿ ಕೊಂಡು, ದ್ರಾಕ್ಷಿ ಗೋಡಂಬಿ ಯನ್ನು ಕರೆದು, ಬೇರೆ ತೆಗೆದಿಟ್ಟು ಕೊಳ್ಳಿ. step 3 : ಅದೇ ಪಾತ್ರೆಗೆ ಹಾಲನ್ನು ಹಾಕಿ ಕುದಿಯಲು ಬಿಡಿ. ಈಗ ತುರಿದ ಮೂಲಂಗಿ ಅನ್ನು ಹಾಕಿ, ಇದನ್ನು ತಿರುಗಿಸಿ ಮುಚ್ಚಳ ಮುಚ್ಚಿ. ಮಧ್ಯ ಮಧ್ಯ ಒಂದೆರಡು ಬಾರಿ ಮುಚ್ಚಳ ತೆಗೆದು ತಿರುಗಿಸಿ. step 4 : ಹಾಲು ಇಂಗಿದಾಗ ಸಕ್ಕರೆ ಯನ್ನು ಹಾಕಿ ತಿರುಗಿಸಿ. ಹಾಲು ಸ್ವಲ್ಪ ಕಾಣಿಸಿ ಕೊಳ್ಳುತ್ತದೆ. Step 5 : ಸಕ್ಕರೆ ಯನ್ನು ತಿರುಗಿಸಿ ಮುಚ್ಚಳ ಮುಚ್ಚಿ 1 ರಿಂದ ೨ ನಿಮಿಷದ ವರೆಗೆ ಬೈಸಿ. ಮೂಲಂಗಿ ಸಕ್ಕರೆ ಹಾಲಿನೊಂದಿಗೆ ಕುದಿಯುತಿರುತ್ತದೆ. Step 6 : ಪಾಕ ಬಂದು ಸ್ವಲ್ಪ ಗಟ್ಟಿ ಯಾಗುತ್ತದೆ ಹಲ್ವಾ. ಮೂಲಂಗಿ ಗಟ್ಟಿಯಾದ ನಂತರ ಕರೆದ ದ್ರಾಕ್ಷಿ ಗೋಡಂಬಿ, ತುಪ್ಪ, ಏಲಕ್ಕಿ ಪುಡಿ ಯನ್ನು ಹಾಕಿ ತಿರುಗಿಸಿ. Tips 1 : ತುಪ್ಪ ಸಕ್ಕರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಾಕಿ. Tips 2 : ಮೊದಲಿನಿಂದ ಕೊನೆವರೆಗೆ ಸಣ್ಣ ಅಥವಾ ಮೀಡಿಯಂ ಉರಿ ಇದ್ದರೆ ಒಳ್ಳೆಯದು. Tips 3 : ಕಡಿಮೆ ಪ್ರಮಾಣದಲ್ಲಿ ಮಾಡುವ ಹಾಗಿದ್ದರೆ ಉರಿ ಪೂರ್ತಿ ಕಮ್ಮಿ ಮಾಡಿಕೊಳ್ಳಿ. Tips 4 : ಕೋವಾ ಬೇಕಾದ್ರೆ ಹಾಕಿ ಕೊಳ್ಳಿ. ಆದ್ರೆ ಕೊಲೆಸ್ಟ್ರಾಲ್ ನೆನಪಿರಲಿ. Tips 5 : ದ್ರಾಕ್ಷಿ ಗೋಡಂಬಿ ಕರೆಯುವಾಗ, ಉರಿ ಸಣ್ಣ ದಿರಲಿ, ಮೊದಲು ಗೋಡಂಬಿ ಹಾಕಿ ನಂತರ ದ್ರಾಕ್ಷಿ ಕರೆಯಿರಿ. ಎರಡನ್ನು ಒಟ್ಟಿಗೆ ಹಾಕ ಬೇಡಿ. ತಯಾರಿಸಲು : 1 / 2 ಗಂಟೆ ಬೇಕಾಗುತ್ತದೆ ಒಳ್ಳೆ ಪೌಷ್ಟಿಕಾಂಶ ಇರುವ ಸಿಹಿ ತಿನಿಸು.

Please follow and like us:
error