How to take care Girls – Puberty

ಋತುಮತಿಯಾದ ಹೆಣ್ಣು ಮಗುವಿನ ಆರೈಕೆ

ಈಗ ಒಂದು ಹೆಣ್ಣು ಮಗು ದೊಡ್ಡವಳಾದಳು ಎಂದರೆ ಮಕ್ಕಳ ಗುಂಪಿನಿಂದ ದೊಡ್ಡವಳಾದಳು ಎಂದರ್ಥ. ಮೈನೆರೆಯುವುದು ಎಂದರೆ ಶರೀರದ ಎಲ್ಲ ಭಾಗಗಳು ಮೈ ಜುಮ್ ಎಂದು ಮೈ ವಿಕಾಸ ಹೊಂದುತ್ತದೆ. ಋತುಮತಿ ಯಾಗಿದ್ದಾಳೆ ಎಂದರೆ ತಿಂಗಳು ತಿಂಗಳು ಋತು ಚಕ್ರ ತಿರುಗುತಿರುತ್ತದೆ. ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಕಣ್ಣು ಕುಕ್ಕುವ ರೀತಿ ಕಾಣಿಸುಯುದಕ್ಕೆ ಶುರುವಾಗುತ್ತದೆ ಅದರದ್ದೇ ಆದ ರೀತಿ ನೀತಿ ನಿಯಮಗಳು ಇದೆ.

ಕಾಲದಿಂದಲೂ ಹಿರಿಯರು ಅದನ್ನು ಪಾಲಿಸುತ್ತಾ ಬಂದಿದ್ದಾರೆ. ಮೊದಲಿಗೆ 13, 14, 15 ವರುಷಕ್ಕೆ ಆಗುತಿದ್ದರು . ಸ್ವಲ್ಪ ಹೆಣ್ಣು ಮಗುವಿಗೆ ಬುದ್ದಿ ಬಂದಿರುತ್ತಿತ್ತು , ಆದ್ರೆ ಮಕ್ಕಳೇ ಆಗಿಬಿಟ್ಟಿಧಾರೆ . 10-11-12 ವರುಷಕ್ಕೆ ಆಗಿಬಿಡುತ್ತಾರೆ . ಏನು ಮಾಡುವುದು. ಈಗಿನ generation ಓಷಧಿಗಳೇ ಕಾರಣ . ಗರ್ಭ ಧರಿಸಿದಾಗಿನಿಂದ ಹೆರಿಗೆ ಯಾಗುವ ವರೆಗೂ ತೆಗೆದು ಕೊಳ್ಳುವ ಓಷಧಿಗಳೇ ಯಾಕೆ ಇರಬಾರಧು.

ಆಗಿದ್ದ ದಿನ, ಎಷ್ಟು ಗಂಟೆಗೆ ಆಗಿಧಾಳೇ ,ಯಾವ ಕಲರ್ ಬಟ್ಟೆ ಅಲ್ಲಿ ಆಗಿದ್ದಾಳೆ, ಮೊದಲು ಯಾರಿಗೆ ತಿಳಿಸಿದಳು, ಅಥವಾ ಯಾರು ಮೊದಲು ನೋಡಿದರು ಎನ್ನುವುದು ಮುಖ್ಯ.

ಒಂದು ಚೀಟಿಯೆಲ್ಲಿ ಆಗಿರುವ ಡೇಟ್ , ಟೈಮ್ , ಡೇ ಮತ್ತು color ಬಟ್ಟೆ ಅನ್ನು ಬರೆದಿಡುವುದು ಉತ್ತಮ.

ವಿಚಾರವನ್ನು ಮೊದ್ಲು ಸೋದರತ್ತೆಗೆ ತಿಳಿಸಬೇಕು. ಇಲ್ಲದಿದ್ದರೆ ಅಕ್ಕ ಪಕ್ಕದ ಮನೆಯವರು ಸೋದರ ಮಾವ ಅಥವಾ ಸೋದರ ಅತ್ತೆ ಎಂದು ಕರೆಯುತ್ತೀವಿ ಅವರಿಗೆ ತಿಳಿಸ ಬೊಹುದು.

ಸ್ನಾನ ಮಾಡಿಸುವುದು:

ಒಂದು ತಟ್ಟೆಯೆಲ್ಲಿ 5 ಲೋಟ ಇಟ್ಟು 5 ಲೊಟ್ಟಕ್ಕೂ 1/2 ಲೋಟ ನೀರು ಹಾಕಿ , ಒಂದ್ರಲ್ಲಿ ಚಿನ್ನ , ಸುಗಂಧ , ಒಂದರಲ್ಲಿ ಪರಿಮಳ ಹೂವುಗಳು , ಒಂದರಲ್ಲಿ ರಾತ್ನೀರು (ಸುಣ್ಣ ಹಾಗು ಅರಶಿನ ), ಮತ್ತೊಂದು ಗಂಧದ ನೀರು . ಜರಡಿಯಲ್ಲಿ ಇವನ್ನೆಲ್ಲ ಹಾಕಿ ಹೆಣ್ಣಿಗೆ ಸ್ನಾನ ಮಾಡಿಸ ಬೇಕು. ರಥ್ನೀರು ಕೊನೆಯಲ್ಲಿ ಆರತಿ ಬೆಳಗಿ ಅಡ್ಡ ಚೆಲ್ಲ ಬೇಕು.

ತಲೆಗೆ ಹಾಗು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಬೇಕು . ಅರಿಷಣ ಪುಡಿ , ಕಡ್ಲೆ ಹಿಟ್ಟು , ರಾಗಿ ಹುಟ್ಟು ಮಿಕ್ಸ್ ಮಾಡಿ ಇಟ್ಟುಕೊಂಡರೆ ದಿನ ನಿತ್ಯ ಸ್ನಾನ ಮಾಡಿಸುವುದಕ್ಕೆ ಅನುಕೂಲವಾಗುತ್ತದೆ. ತಲೆಗೆ ಸೀಗೆಪುಡಿ ಹಾಕಬಹುದು.  ಬೇಗ ಸ್ನಾನ ಮಾಡಿಸಿ ಬೇಗ ತಲೆ ಒರೆಸಿ ವಾನಗಿಸ ಬೇಕು. 16 ದಿನ ಹೀಗೆ , one ದಿನ ತಲೆಗೆ , ಮತ್ತೆ ಒಂದು ದಿನ ಮೈಗೆ ಸ್ನಾನ ಮಾಡಿಸ ಬೇಕು. ಸೋಪು ಕಡಿಮೆ ಬಳಸಬೇಕು.

ನೆನೆಸಿದ ಬಟ್ಟೆಯೆನ್ನ ದೋಭಿಗೆ ಅಥವಾ ಮಡಿವಾಳರಿಗೆ ಅಥವಾ ಇಸ್ತ್ರಿ ಮಾಡುವವರಿಗೆ ಕೊಡಬೇಕು. ದಿನವೂ ಅಗಸರೇ ಬಟ್ಟೆ ಕೊಡಬೇಕು- ಹಾಸಿಕೊಳ್ಳಲು ಹೊದಿಕೆಗೆ ಮತ್ತು ಹಾಕಿಕೊಳ್ಳಲು – ಹೀಗೆ ಪದ್ದತಿ – ಪದ್ದತಿ ಅನ್ನೋದಾವುದಕ್ಕಿಂತ ಏನೋ ಒಂದು ಥರ ಶಾಂತಿ ಎಂದು ಹೇಳಬಹುದು . 16 ದಿನ ಒಳಗೆ ಹೋಗೋ ಹಾಗಿಲ್ಲ ಬೇರೆ ಎನ್ನನು ಮುಟ್ಟಿಸಿಕೊಳ್ಳೋ ಹಾಗಿಲ್ಲ. ಹುಡುಗಿಗೆ ಇದೆಲ್ಲ ಮಾಡಿಕೊಳ್ಳಲು ಬರದಿದ್ದರೆ ನೀವೇ ಯಾರಾದರೂ ಸ್ನಾನ ಮಾಡಿಸಿ , ತಲೆ ಒಣಗಿಸಿ , ತಲೆ ಬಾಚಿ, ದಿನವೂ ಹೂವು ಮುಡಿಸಿ. ನಂತರ ನೀವು ಸ್ನಾನ ಮಾಡಿ.

ಇನ್ನು ಊಟ ತಿಂಡಿ:

ಕಿಚಡಿ, ಕಾಯಿ ಹಾಲು , ಶಾವಿಗೆ ಪಾಯಸ , ಹೆರಸು ಬೆಲೆ ಪಾಯಸ , ಬಾದಾಮಿ ಹಾಲು , ಹೀಗೆ ಸಿಹಿ ಇಂದ ಮಾಡಿದ ತಿಂಡಿಗಲ್ಲನ್ನೇ ಕೊಡಬೇಕು , ಉಪ್ಪು ಹಾಕಿದ್ದು ಕೊಡಬಾರದು . ಉಪ್ಪು ತಿಂದರೆ ಮೈ ನವೆ ಬರುತ್ತದೆ , ಚರ್ಮ ಒರಟಾಗುತ್ತದೆ ಅನ್ನೋ ವಾಡಿಕೆ 

ರಾತ್ರಿ ಮೆಂತ್ಯ ಅಕ್ಕಿ ನೆನೆಸಿ , ಬೆಳ್ಳಿಗೆ ಮಿಕ್ಸಿ ಮಾಡಿ , ದೋಸೆ ಹಾಕಿ ತುಪ್ಪದಲ್ಲಿ ಬೇಯಿಸಿ ಅದಕ್ಕೆ ಸಿಹಿ ಚಟ್ನಿ ಮಾಡಿ ಕೊಡಿ (ಒಣಕೊಬ್ಬರಿ ಬೆಲ್ಲ ಎಲ್ಲಕಿ )

ಮೆಂತ್ಯ ಅಕ್ಕಿ ಮಿಷನ್ ಮಾಡಿಸಿ, ಹಿಟ್ಟಿನ ಮುದ್ದೆ ಮಾಡಿ ಕೊಡಿ, ಮುದ್ಧೆ ಮದ್ಯದಲ್ಲಿ ಹಳ್ಳ ಮಾಡಿ ತುಪ್ಪ ಹಾಕಿ ಕೊಡಿ. ಊಟ ಮಾಡಲು ಬೇಜಾರ್ ಆದರೆ ನಿಮ್ಮ ಸಾರನ್ನೇ ಸ್ವಲ್ಪ ಹಾಕಿ.

ದ್ರಾಕ್ಷಿ, ಗೋಡಂಬಿ, ಬಾದಾಮಿ, ಕಾರ್ಜುರ, ಪಿಸ್ತಾ, ಅಂಜೂರ, ಅಸಿ ಕಾರ್ಜುರ, ಕೆಂಪು ಕಲ್ಲು ಸಕ್ಕರೆ, ಕರಿ ಎಳ್ಳು ಅಥವಾ ಬಿಳಿ ಎಳ್ಳು, ಬೆಲ್ಲ, ತುಪ್ಪ, ಮೆಂತ್ಯ, ಒಣಕೊಬ್ಬರಿ ಎಷ್ಟನ್ನು ಯಾವ ತಿಂಡಿಯ ರೂಪದಲ್ಲಾದರೂ ಕೊಡ ಬಹುದು. ಇವುಗಳ್ಳನ್ನ ಪ್ರತಿ ನಿತ್ಯ ಸೇವಿಸಬೇಕು. ಮೊದಲಿನ ಕಾಲದಲ್ಲಿ ಒಣಕೊಬ್ಬರಿ ಎಲ್ಲಿ ತುಪ್ಪವನ್ನು ಕುಡಿಯಲು ಕೊಡುತ್ತಿದ್ದರು. ಆದರೆ ಈಗಿನ ಕಾಲದ ಮಕ್ಕಳು ಹಾಗೆಲ್ಲ ತಿನ್ನುವುದಿಲ್ಲ. ಹೊರಗಿನ ತಿಂಡಿಗಳನ್ನೂ ಕೊಡಬಹುದು, ಆದ್ರೆ ಬೇಕರಿ ತಿಂಡಿಗಳು ಬೇಡ.

ಮನೆಯಲ್ಲೇ ಬಿಸಿ ಬಿಸಿ ತಿಂಡಿ ಊಟ ಹಾಲು ಕೊಡುತ್ತೀರಿ. ಡ್ರೈ fruits ಚಿಕ್ಕದಾಗಿ ಕಟ್ ಮಾಡಿ ತುಪ್ಪದಲ್ಲಿ ಕರೆದು ಅದಕೆ ಒಣಕೊಬ್ಬರಿ ಎನ್ನು ಚಿಕ್ಕ ಚಿಕ್ಕ ದಾಗಿ ಕಟ್ ಮಾಡಿ ಹಾಕಿ. ಬೆಲ್ಲ ಅಥವಾ ಕೆಂಪು ಕಲ್ಲು ಸಕ್ಕರೆ ಎನ್ನು ಹಾಕಿ. ದಿನವೂ ತಿನ್ನಲು ಸ್ವಲ್ಪ ಸ್ವಲ್ಪ ಕೊಡುತೀರಿ. ತಿನ್ನಲು ಬೇಸರ ಮಾಡಿ ಕೊಂಡರೆ ಅದನ್ನೇ ಮಿಕ್ಸಿ ಮಾಡಿ, ಬಾದಾಮಿ ಹಾಲು ಮಾಡಿ ಕೆಂಪು ಕಲ್ಲು ಸಕ್ಕರೆ ಹಾಕಿ ಕೊಡಿ. ತಿನ್ನಲು ಕೊಡುವಹಾಗಿದ್ದಾರೆ ಬೆಲ್ಲ ಹಾಕಿ ಎಳ್ಳು ಹುರಿದು ಹಾಕಿ ಎಲ್ಲ ಮಿಕ್ಸ್ ಮಾಡಿ ತಿನ್ನಲು ಕೊಡಿ. ಬೇರೆ ತಿಂಡಿಗಳಿಗೂ ದ್ರಾಕ್ಷಿ ಗೋಡಂಬಿ ಬಾದಾಮಿ ಎಳ್ಳು ಹಾಕಿ ತಿಂಡಿ ತಯಾರಿಸಿ. ಉಪ್ಪಿಲ್ಲದೆ ತಿನ್ನುವುದಿಲ್ಲ ಈಗಿನ ಮಕ್ಕಳು. 3 ತಿಂಗಳು ಕೊಡಿ.

ಆರತಿ ಮಾಡುವುದು :

ಎಲ್ಲರಿಗೂ ತಿಳಿಸುವುದು ಗ್ರಾಂಡ್ ಆಗಿ ಮಾಡುವುದು ಸ್ಕೂಲ್ ಮಕ್ಕಳಿಗೆ ಎಲ್ಲ ಗೊತ್ತಾಗೋ ಹಾಗೆ ಮಾಡುವುದು, ಅಧ್ನೆಲ್ಲ ತಂದೆ ತಾಯಿಗಳು ಗಟ್ಟಿ ಮನ್ನಸ್ಸಿನಿಂದ ಇವುಗಳನ್ನೆಲ್ಲ ವರ್ಜಿಸಬೇಕು. ರೀತಿ ನೀತಿ ಮಡಿ ಮೈಲಿಗೆ ಸಂಪ್ರದಾಯ ಯಾವುದು ಕಡಿಮೆ ಯಾಗಬಾರದು. ಆದರೆ ಯಾರಿಗೂ ಗೊತ್ತಾಗದ ಹಾಗೆ ನೋಡಿ ಕೊಳ್ಳಿ. ನೆಂಟರು ಯಾರಾದರೂ ವಸ್ಕೆ (ಊಟ ತಿಂಡಿ ಹಣ್ಣು) ತಂದರೆ ಕುಂಕುಮ ಕೊಟ್ಟು ಹೆಣ್ಣಿಗೆ ಇದನೆಲ್ಲ ಕೊಡಬಹುದು. ಗಿಫ್ಟ್ ಕೊಡೋಹಾಗಿದರೆ ೧೬ನೆ ದಿನ ಕೊಡಬಹುದು.

ತಲೆಗೆ ನೀರು ಹಾಕಿದ ೪ ದಿನವೂ ಆರತಿ ಮಾಡಬೇಕು, ಕುಂಕುಮ ಕೊಟ್ಟು, ತಂಬುಲ ಕೊಟ್ಟು ಮಡಿಲು ತುಂಬ ಬೇಕು. ಕೊನೆಯೆಲ್ಲಿ ಕೆಂಪು ನೀರ್ ಮಾಡಿ ಆರತಿ ಮಾಡಿ ಆಚೆಗೆ ಚೆಲ್ಲ ಬೇಕು.

ಈ ನಾಲ್ಕು ದಿನ, ಲಕ್ಷ್ಮಿ, ಸರಸ್ವತಿ, ಪಾರ್ವತಿ, ಚಾಮುಂಡೇಶ್ವರಿ ಡ್ರೆಸ್ ಹಾಕಿ ಫೋಟೋ ತೆಗೆಸಿ ಕೊಳ್ಳಬಹುದು.

ಧೃಷ್ಟಿಗೆ ( ಒಂದು ಕಭಿನ್ನದ ಮೊಳೆ, ಒಂದು ಇಜ್ಜಲು ಪೀಸು, ಒಂದು ನಿಂಬೆ ಹಣ್ಣು, ಮೆಣಸಿನಕಾಯಿ ಮೂರು , ಒಂದು spoon ಕಲ್ಲುಪ್ಪು ಎಷಟನ್ನು ಒಂದು plastic cover ನಲ್ಲಿ ಹಾಕಿ ಜೊತೆಯೆಲ್ಲಿ ಇಟ್ಟು ಕೊಂಡಿರಬೇಕು) ದೃಷ್ಟಿಯು ಆಗುವುದಿಲ್ಲ ಯಾವ ಕೆಟ್ಟದಾದ ಬೇರೆ ಬೇರೆ ಸೋಂಕುಗಳು ಹತ್ತಿರ ಬರುವುದಿಲ್ಲ.

ಪರೀಕ್ಷೆ ಇದ್ದರೆ:

ಇಂತಹ ಪರಿಸ್ಥಿತಿ ಎಲ್ಲಿ ಇರುವಾಗ ಪರೀಕ್ಷೆ ಟೆಸ್ಟ್ ಏನಾದರೂ ಇದ್ದರೆ, ಜೊತೆಯೆಲ್ಲೆ ಕರೆದು ಕೊಂಡು ಹೋಗಿ ಬಿಟ್ಟು. ಬಿಟ್ಟ ಮೇಲೆ ಜೊತೆಯೆಲ್ಲಿಯೇ ಕರೆದುಕೊಂಡು ಬರಬೇಕು. ಯಾರಿಗೂ ಅನುಮಾನ ಬಾರದ ಹಾಗೆ ತಂದೆ ತಾಯಿ ನಡೆದುಕೊಳ್ಳ ಬೇಕು.

 

ಧರಿಸಿರುವ ಬಟ್ಟೆ ಯನ್ನು ಪೊದೆಗಳ್ಳಲ್ಲಿ ಹಾಕಬಾರದು. ಹಾವು , ಚೇಳು , ಹಲ್ಲಿ ಗಳಿದರೆ, ಅದಕ್ಕೆ ತಗುಲಿದರೆ, ಅಥವಾ ಓಡಾಡಿದರೆ , ಅದು ತಪ್ಪು ಅಥವಾ ಶಾಪವು ಆಗಬಹುದು .

3 ತಿಂಗಳ ವರೆಗೆ ತಣ್ಣೀರು ಮುಟ್ಟ ಬಾರದು, ಕುಡಿಯಲು ಬಾರದು. ಪರಕೆ ಮುಟ್ಟಬಾರದು , ಎಂಜಲು ತಟ್ಟೆ ತೆಗೆಯುವುದು , ತೊಳೆಯುವುದು ಮಾಡಬಾರದು. ಬೇರೆ ಯವರ ಹಾಗು ತನ್ನದೇ ಬಟ್ಟೆ ಒಗೆಯಬಾರದು .3 ತಿಂಗ್ಳು , 1 ತಿಂಗ್ಳು ಅಥವಾ 16 ದಿನವಾದರೂ ತಣ್ಣೀರು ಮುಟ್ಟದ ಹಾಗೆ ಬಿಸಿ ನೀರಿನಲ್ಲೇ ಎಲ್ಲ ಆಗಬೇಕು. ಮನೆಯೆಲ್ಲಿ ತೊಂದರೆ ಇದ್ರೆ 16 ನೇ ದಿನವೇ ಗಂಗೆ ಪೂಜೆ ಮಾಡ್ಸಿ , ಮನೆಲ್ಲಿ ಇರುವ ನೆಲ್ಲಿಯೆಲ್ಲಿ ಗಂಗೆ ಪೂಜೆ ಮಾಡ್ಸಿ ತಣ್ಣೀರು ಮುಟ್ಟ ಬಹುದು. ಪರವಾಗಿಲ್ಲ ಒನ್ನೊ ಹಾಗಿದ್ದರೆ 1 ತಿಂಗ್ಳು ಅಥವಾ 3 ತಿಂಗ್ಳು ಇದ್ರೆ ಒಳ್ಳೆಯದು .

ಸೂತಕ ವನ್ನು ಕಳೆದು ಕೊಳ್ಳೂವ ರೀತಿ:

16 ನೇ ದಿನಕ್ಕೆ ಪುರೋಹಿತರಿಂದ ಶುದ್ದಿ ಅಂದ್ರೆ ಅವರರವ ಮನೆಯ ಸಂಪ್ರದಾಯ ದಂತೆ ಸೂತಕ ವನ್ನು ಕಳೆದು ಕೊಳ್ಳೂವ ರೀತಿ ಇದೆಯೋ ಅದೇ ರೀತಿ ಮಾಡುವುದು ಉತ್ತಮ. ಲಿಂಗ ಕಟ್ಟೋ ಹಾಗಿದ್ದರೆ ಆ ದಿನವೇ ಕಟ್ಟಿಸೊಬೊಹುದು . ಅಂದಿನಿಂದಲೇ ದಿನವೂ ಶಿವ ಪೂಜೆ ಮಾಡ ಬೇಕಾಗುತ್ತದೆ . ಇಲ್ಲವಾದರೆ ಲಿಂಗ ಧಾರಣೆ ಮಧುವೆ ಮಾಡುವಾಗ ಕಟ್ಟಿಸಬಹುದು.

16 ನೇ ದಿನ mane ಶುದ್ಧಿ ಮಾಡಿ, ದೇವರನ್ನು ಶುದ್ಧಿ ಮಾಡಿ. ಹುಡುಗಿಗೆ ಹೊಸ ಬಟ್ಟೆಗಳನ್ನು ಹಾಕಿ ಪುರೋಹಿತರಿಂದ ಒಳಕ್ಕೆ ಕರೆದುಕೊಳ್ಳಬೇಕು , ಇದು ವಾಡಿಕೆ.

ಇದು ರೀತಿ ನೀತಿ ಸಂಪ್ರದಾಯ ಮನೆಗೆ ಅಭಿವೃದ್ಧಿ ಶ್ರೇಯಸ್ಸು ವಾಡಿಕೆ ಎಲ್ಲ ಸೇರಿಕೊಂಡಿರುತ್ತೆ . ಇದರಿಂದ ಮಗಳಿಗೆ ಒಂದೊಂದೇ ಜವಾಬ್ದಾರಿಗಳನ್ನು ಕೊಡುತ್ತ ಹೋಗಬೇಕು. ಜವಾಬ್ಧಾರಿ ಎಂದರೆ ಕೆಲಸಗಳನ್ನ ಅಂತ ಅಲ್ಲ . ಹಿರಿಯರಿಗೆ , ದೊಡ್ಡವರಿಗೆ , ತಂದೆ ತಾಯಿಗೆ ದೇವರಿಗೆ ಅಕ್ಕ ತಂಗಿಗೆ ಅಣ್ಣ ತಮ್ಮರಿಗೆ ಅತ್ತೆ ಮಾವರಿಗೆ, ದೊಡ್ಡಪ್ಪ ದೊಡ್ಡಮ್ಮರಿಗೆ,ಚಿಕಪ್ಪ ಚಿಕ್ಕಮ್ಮರಿಗೆ, ಸ್ನೇಹಿತರಿಗೆ ಹೀಗೆ ಎಲ್ಲರ ಹತ್ತಿರ ನಯ ವಿನಯ ನಮ್ರತೆ ನಾಚಿಕೆ, ಚಿಕ್ಕ ಚಿಕ್ಕ ದಾಗಿ ತನ್ನ ಕೆಲಸ thane ಮಾಡಿ ಕೊಳ್ಳುವುದು . ದೇವರಲ್ಲಿ ಭಕ್ತಿ ಇಡುವುದು . ತಂದೆ ತಾಯ ಹಿರಿಯರ ಮಾತು ಕೇಳುವುದು, ತಮ್ಮ ತಂಗಿಯರನ್ನು ನೋಡಿ ಕೊಳ್ಳುವುದು. ಪ್ರೀತಿ ಇರಬೇಕು ಇಲ್ಲಿ . ಇದನ್ನು ಮೂಡಮೊದ್ಲು ಕಲಿಯುತಾ ಹೋದರೆ ಮಿಕ್ಕಿದೆಲ್ಲ ತಾನೆ ತಾನಾಗಿ ಬರುತ್ತದೆ. ಬೇರೆ ಗಂಡಸರ ಹತ್ತಿರ ಸಲಿಗೆ ಇಂದ ಇರುವುದು , ಮಾತನಾಡಿಸುವುದು , ತಮಾಷೆ ಮಾಡುವುದು, ಎಲ್ಲ ಇಲ್ಲಿಂದಲೇ ನಿಲ್ಲಿಸ ಬೇಕು. ಮಗಳಿಗೆ ಕೊಂಕು ಕೂಡ ಹತ್ತಿರ ಸುಳಿಯ ಬಾರದು. ಬಂಗಾರ ಬಂಗಾರನೇ , ಕಬ್ಬಿಣ ಕಬ್ಬಿಣನೇ ಇದು ತಿಳಿದು ಕೊಂಡರೆ ಸಾಕು.

ಮಗು ಚಿಕ್ಕವಳು, ಅದಕ್ಕೆ ಇದೆಲ್ಲ ಹೇಳ ಬೇಕಾಯಿತು . ಸ್ವಲ್ಪ ದೊಡ್ಡವಳಾದರೆ ಅವಳಿಗೆ ತಿಳಿಯುತ್ತದೆ ಸರಿ ತಪ್ಪುಗಲ್ಲೆಲ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎನ್ನುವ ಗಾದೆ.

ವಂಶದ ಕುಡಿಯನ್ನು ಕಾಪಾಡಿ ಕೊಳ್ಳುವುದು ತಂದೆ ತಾಯಿ ಮತ್ತು ಹಿರಿಯರ ಜವಾಬ್ಧಾರಿಗಳು.

ಸದಾ ದೇವರ ಕೃಪೆ ನಿಮ್ಮ ಮಗಳ ಮೇಲೆ ಇರಲಿ.

 

Please follow and like us:
error